ಕರ್ನಾಟಕ ರತ್ನ
'ಕರ್ನಾಟಕ ರತ್ನ' ಕರ್ನಾಟಕ ಸರ್ಕಾರ ನೀಡುವ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ.
ಈ ಪ್ರಶಸ್ತಿಯನ್ನು ೧೯೯೨ರಲ್ಲಿ ಪ್ರಾರಂಭಿಸಲಾಯಿತು. ಪ್ರಶಸ್ತಿಯು ೫೦ ಗ್ರಾಂ ತೂಕದ ಚಿನ್ನದ ಪದಕ, ಸನ್ಮಾನ ಪತ್ರ, ನೆನಪಿನ ಕಾಣಿಕೆ ಮತ್ತು ಒಂದು ಶಾಲನ್ನು ಒಳಗೊಂಡಿರುತ್ತದೆ.
ಇದುವರೆವಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ.
ಕ್ರಮ ಸಂಖ್ಯೆ | ಹೆಸರು | ಜನನ / ಮರಣ | ಪ್ರಶಸ್ತಿ ಪ್ರಧಾನ ವರ್ಷ | ಕಾರ್ಯಕ್ಷೇತ್ರ |
---|---|---|---|---|
1. | ಕುವೆಂಪು (ಕೆ. ವಿ. ಪುಟ್ಟಪ್ಪ) | 1904 – 1994 | 1992 | ಸಾಹಿತ್ಯ |
2. | ಡಾ|| ರಾಜ್ ಕುಮಾರ್ | 1929 – 2006 | 1992 | ಚಲನಚಿತ್ರ ರಂಗ, ಸಂಗೀತ |
3 | ಎಸ್. ನಿಜಲಿಂಗಪ್ಪ | 1902 – 2000 | 1999 | ರಾಜಕೀಯ |
4 | ಸಿ. ಎನ್. ಆರ್. ರಾವ್ | 1934 | 2000 | ವಿಜ್ಞಾನ |
5 | ದೇವಿ ಪ್ರಸಾದ್ ಶೆಟ್ಟಿ | 1953 | 2001 | ವೈದ್ಯಕೀಯ |
6. | ಭೀಮಸೇನ ಜೋಷಿ | 1922 – 2011 | 2005 | ಸಂಗೀತ |
7. | ಶ್ರೀ ಶಿವಕುಮಾರ ಸ್ವಾಮಿಗಳು | 1907 - 2019 | 2007 | ಸಾಮಾಜಿಕ ಸೇವೆ |
8. | ದೇ. ಜವರೇಗೌಡ | 1915 – 2016 | 2008 | ಶಿಕ್ಷಣ, ಸಾಹಿತ್ಯ |
9 | ಡಿ. ವೀರೇಂದ್ರ ಹೆಗ್ಗಡೆ | 1948 | 2009 | ಸಾಮಾಜಿಕ ಸೇವೆ |